Saturday, 25 July 2015


ರೈತರ ಸಂಕಟಕ್ಕೆ ಮಿಡಿದ ವಿದ್ಯಾರ್ಥಿಗಳ ಹೃದಯ

             ಆತ್ಮಹತ್ಯೆ ನಿಲ್ಲಬೇಕು, ರೈತರ ನ್ಯಾಯಯುತ ಹಕ್ಕುಗಳ ಈಡೇರಿಕೆಗಾಗಿ ಕರ್ನಾಟಕ ಜನಶಕ್ತಿ ಹಮ್ಮಿಕೊಂಡಿರುವ "ರೈತ ಹೋರಾಟ ಜಾಥದಲ್ಲಿ" 60 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಕ್ರಿಯವಾಗಿ ಬದ್ಧತೆಯಿಂದ ದುಡಿಯುತ್ತಿದ್ದಾರೆ. ಈಗಾಗಲೇ 300 ಹಳ್ಳಿಗಳಲ್ಲಿ ಪ್ರಚಾರ ಜಾಥಾ ನಡೆದಿದ್ದು 5 ತಂಡಗಳು ನಿರಂತರವಾಗಿ ಶ್ರಮಿಸುತ್ತಿವೆ . ಈ ವಿದ್ಯಾರ್ಥಿಗಳು ರೈತರ ನೋವುಗಳನ್ನು ತಮ್ಮ ನೋವುಗಳಾಗಿ ಮಾರ್ಪಡಿಸಿಕೊಂಡಿದ್ದಾರೆ. ಸ್ನಾನವಿಲ್ಲ, ಸರಿಯಾದ ಶೌಚಾಲಯಗಳಿಲ್ಲ, ಸುಸ್ತು, ಗಂಟಲು ನೋವು ಏನೇ ಇದ್ದರೂ ಆಗಸ್ಟ್ 3 ರ ಜಿಲ್ಲಾಧಿಕಾರಿ ಕಛೇರಿ ದಿಗ್ಭಂಧನದ ಮೂಲಕ ರೈತರ ಸಮಸ್ಯೆಗಳಿಗೆ ತಕ್ಷಣದ ಪರಿಹಾರಕ್ಕಾಗಿ ಹೋರಾಡುವುದು ವಿದ್ಯಾರ್ಥಿಗಳ ಮುಂದಿರುವ ಗುರಿಯಾಗಿದೆ. ಇವರನ್ನು ನೋಡಿ ನನಗೆ ಮತ್ತಷ್ಟು ಉತ್ಸಾಹ ಬಂದು ಈ ಜನವಿರೋಧಿ ವ್ಯವಸ್ಥೆಯ ಮೇಲಿನ ಆಕ್ರೋಶ ಹಿಮ್ಮಡಿಯಾಗಿದೆ. 
ಬಲಿಷ್ಟ ವಿದ್ಯಾರ್ಥಿ ಚಳವಳಿ ಕಟ್ಟೋಣ. ಉತ್ತಮ ಸಮಾಜಕ್ಕಾಗಿ ಶ್ರಮಿಸೋಣ.






No comments:

Post a Comment